ಬುಧವಾರ, ಮಾರ್ಚ್ 20, 2019

ಪಾಕಿಸ್ತಾನದಲ್ಲೂ ಒಳ್ಳೆಯವರಿದ್ದಾರೆನ್ನುವವರಿಗೆ





















ಪ್ರತಿಯೊಬ್ಬರು ಓದಲೇ ಬೇಕಾದ ಲೇಖನವಿದು.

ಬರೆದವರು
#Jbrswamy_Rangaswamy.

#ಮೈಸೂರಿನಲ್ಲೂ_ಉಗ್ರರು. ಅವರು ನುಸುಳಲು #ನೆರವು_ನೀಡಿದವರು ಯಾರು ?
ಭಾಗ - 1 ಮತ್ತು 2

*

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ. 2006ರ ಒಂದು ದಿನ.
ವಿದ್ಯಾರ್ಥಿಗಳಿಬ್ಬರ ಪಾಸ್ ಪೋರ್ಟ್ ವೆರಿಫಿಕೇಷನ್ ಬಂದಿತ್ತು. ಪೇದೆಯೊಬ್ಬ ಇನ್ಸ್‌ಪೆಕ್ಟರ್ ಬಂದೊಡನೆ , " ಸರ್ , ಸ್ಟೂಡೆಂಟ್ಸ್ ಗಳಿಬ್ಬರ ಪಿಪಿ ವೆರಿಫಿಕೇಷನ್ ಬಂದಿದೆ . ಆ ಹುಡುಗರು ಮೂರು ದಿನದಿಂದ ಬರ್ತಾ ಇದ್ದಾರೆ. ತಾವು ಸಿಗಲಿಲ್ಲ. ಪಾಪ , ಈವತ್ತು ಬೆಳಗ್ಗಿಂದ ಕಾಯ್ದು ಹೋದ್ರು ಸರ್. "

" ಎಲ್ಲಿದ್ದಾರೆ ಅವರು ?. ಇದ್ದರೆ ಅವರನ್ನು ಒಳಕ್ಕೆ ಕರಿ " ಅಂದರು ಉದಯಗಿರಿ ಠಾಣೆಯ ಇನ್ಸ್‌ಪೆಕ್ಟರ್ ಎಚ್.ಎಲ್. ನಾಗರಾಜ್.

ಆ ಹುಡುಗರಿಗಾಗಿ ಹೊರಗಡೆ ನೋಡಿಕೊಂಡು ಬಂದ ಪೇದೆ , " ಇಲ್ಲಾ ಸಾರ್. ಕಾಯ್ದು ಕಾಯ್ದು ಹೊರಟು ಹೋಗಿ ಬಿಟ್ಟಿದ್ದಾರೆ. ಅವರಿಬ್ಬರ ಫೋಟೋ ನೋಡಿದೆ. TALLY ಆಗುತ್ತೆ ಸಾರ್. ಸೈನ್ ಹಾಕಿ ಕಳಿಸಬಹುದು ".

" ಸೈನ್ ಹಾಕೇ ಕಳಿಸೋಣಂತೆ . ಫೋಟೋ ಸರಿಯಾಗಿ ಹೋಲಿಸಿ ನೋಡಿದೆಯಾ ? ಎರಡು ಕಿವಿಗಳ ನಡುವೆ ಇರೋ ಮುಖ ಅವರದ್ದೇನಾ ?".

" ಹೌದು ಸಾರ್.ತಮ್ಮ ಸೈನ್ ಆದ್ರೆ ಡಿಸ್ ಪ್ಯಾಚ್ ಮಾಡಿ ಕಳಿಸ್ತೇನೆ. ".

" ಸರಿ . ನಾಳೆ ಅವರು ಬರಲಿ. ನೋಡಿ ಸೈನ್ ಹಾಕಿ ಕಳಿಸೋಣ. ಅಷ್ಟರಲ್ಲಿ ಪ್ರಪಂಚವೇನೂ ಮುಳುಗೋಗೋದಿಲ್ಲ ".
ಅಂತ ಇನ್ಸ್‌ಪೆಕ್ಟರ್ ಮಾತು ಮುಗಿಸಿದರು.
*
ಮಾರನೇ ದಿನ :

" ಆ ಹುಡುಗರು ಬಂದಿದ್ದಾರೆ . ಒಳಿಕ್ಕೆ ಕರೀಲಾ ಸರ್ " .

" ಆಯ್ತು ಕರಿ " ಅಂದರು ಇನ್ಸ್‌ಪೆಕ್ಟರ್ ನಾಗರಾಜ್.
ಅವರ ಟೇಬಲ್ ಮೇಲೆ ಆ ಹುಡುಗರ ವಿಳಾಸ , ವೋಟರ್ ಐಡಿ ಇತ್ಯಾದಿ ಇತ್ಯೋಪರಿಗಳೆಲ್ಲವೂ ಇದ್ದವು.

24-25ರ ಆ ಹುಡುಗರು ಎದುರುಗಡೆ ನಿಂತಿದ್ದರು. ಅವರ ಜೊತೆಗೆ ಪಾಸ್ ಪೋರ್ಟ್ ಮಾಡಿಸಿಕೊಡುವ ಏಜೆಂಟ್ ಕೂಡ ಇದ್ದ.

" ನೀವ್ಯಾಕೆ ಬಂದಿದ್ದೀರಿ ? ಹೊರಗಡೆ ಇರ್ರೀ " ಇನ್ಸ್‌ಪೆಕ್ಟರ್ ಆಜ್ಞಾಪಿಸಿದರು.

" ಇಲ್ಲಾ ಸಾರ್. ಈ ಹುಡುಗರಿಗೆ ಟೇಷನ್ ವಸ್ದು. ವಸಿ ನಾಚ್ಕೆ. ಅದಕ್ಕೆ ನಾನೂ ಬಂದೆ " ಎಂದಾತ ಹಲ್ಕಿರಿದ."

" ನಾಚ್ಕೆ ಯಾಕೆ ಅನ್ನೋದನ್ನ ವಿಚಾರಿಸೋಣ . ನೀವು ಸ್ವಲ್ಪ ಆಚೆ ಇರಿ "

ಆ ಹುಡುಗರಿಬ್ಬರೂ ಕೆಂಪಗೆ ಆರು ಅಡಿ ಎತ್ತರವಿದ್ದವರು . ನೋಡಿದೊಡನೆ ನೆನಪಿಟ್ಟುಕೊಳ್ಳಬಲ್ಲ ಆಕಾರ , ಕಳೆ.
"ಏನು ನಿನ್ನ ಹೆಸರು ?" ಇನ್ಸ್‌ಪೆಕ್ಟರ್ ಒಬ್ಬೊಬ್ಬನನ್ನೇ ಕೇಳಲು ಶುರು ಮಾಡಿದರು.

ಅವರಿಬ್ಬರೂ ಎಲ್ಲಕ್ಕೂ ಅರ್ಥವೇ ಆಗಲಿಲ್ಲವೆಂಬಂತೆ ತಲೆಯಾಡಿಸಿದರು.
" ಅಲ್ಲಯ್ಯಾ ನೀನು ಎಲ್ಲಿ ಓದಿದ್ದು ? ಪಿಯು ಎಲ್ಲಿ ಮಾಡಿದೆ. ಈ ಅಡ್ರಸ್ಸಿನಲ್ಲಿ ಎಷ್ಟು ದಿನದಿಂದ ವಾಸವಿದ್ದೀರಾ. . . ? "
ಕನ್ನಡದಲ್ಲೇ ಪ್ರಶ್ನೆಗಳನ್ನು ಕೇಳುತ್ತಾ ಹೋದರು. ಆ ಹುಡುಗರಿಬ್ಬರೂ ಪ್ರಶ್ನೆಯೇ ಗೊತ್ತಾಗದವರಂತೆ ಬೆ ಬ್ಬೆ ಬ್ಬೆ ಅಂದರು.

" ಇವರಿಬ್ಬರೂ ಉರ್ದು ಮತ್ತು ಇಂಗ್ಲೀಷ್ನಲ್ಲಿ ಓದಿರೋದು. ಮನೇಲೂ ಕನ್ನಡ ದಾಸ್ತಿ ಮಾತಾಡಲ್ಲ ಸರ್ " ಏಜೆಂಟ್ ಆ ಹುಡುಗರ ಪರ ಸುವ್ವೀ ಹಾಡಿದ.

" ಏಯ್ ಮುಚ್ಕಂಡ್ ನಿಂತ್ಕಳಯ್ಯಾ . ಮೈಸೂರಿನಲ್ಲಿ ಹುಟ್ಟಿ ಬೆಳೆದು , ಇಲ್ಲೇ ಓದ್ದೋರಿಗೆ ಕನ್ನಡ ಬರೊಲ್ಲಾ ಅಂದ್ರೇನು ? . ಏನು ಮಾತಾಡ್ತಿದ್ದೀಯಾ ನೀನು ? ".

" ಏನ್ಸಾರ್ ಮುಸಲ್ಮಾನ್ ಲೋಗ್ ಬಂದ್ರೆ ಇಲ್ಲದ್ದೆಲ್ಲಾ ತಕರಾಲ್ ಮಾಡ್ತೀರಲ್ಲಾ ? . ಡಾಕುಮೆಂಟ್ಸ್ ಏನೈತೆ ನೋಡಿ ಕಳಿಸಿ ಸಾರ್. ಕನ್ನಡ ನಾವು ಅಷ್ಟಾಗಿ ಮಾತಾಡಲ್ಲ.ರೂಢಿಯಿಲ್ಲ. ಅದಿಕ್ಕೇ ಇವೆಲ್ಲಾ ತೊಂದ್ರೆ ಬ್ಯಾಡಾ ಸಾರ್. . ."

ಏನೇನೋ ಮಾತು ನಡೆಯಿತು. ಆ ಹುಡುಗರಲ್ಲೊಬ್ಬ ಕುದಿಯುತ್ತಿದ್ದ. ಅವಕಾಶ ಸಿಕ್ಕರೆ ಹಲ್ಲೆಮಾಡುವಂತಿದ್ದ. ಕೊನೆಯಲ್ಲಿ ಇನ್ಸ್‌ಪೆಕ್ಟರ್ ಹೇಳಿದರು :
" ಇವರ ಅಪ್ಪ ಅಮ್ಮನ್ನ ಕರಕೊಂಡು ಬಾ . ಮೊದಲು ಅವರತ್ರ ಮಾತಾಡ್ತೀನಿ. ಆಮೇಲೆ ಮುಂದಿನ ಕೆಲಸ."
*
ಎರಡು ದಿನಗಳ ನಂತರ ಒಬ್ಬ ಕಪ್ಪಗಿನ ಕೂಲಿ ಹೆಂಗಸಿನೊಂದಿಗೆ ಏಜೆಂಟ್ ಮತ್ತು ಆ ಹುಡುಗರು ಬಂದರು.
" ಇವರ್ದು ಅಮ್ಮ " ಎಂದ ಏಜೆಂಟ್.

ಇನ್ಸ್‌ಪೆಕ್ಟರ್ ವಿಚಾರಿಸಿದರು. ಆಕೆ ಕನ್ನಡದಲ್ಲೇನೋ ಉತ್ತರಿಸಿದಳು. ಅವಳ ಆಕಾರ , ಬಣ್ಣ , ಆ ಹುಡುಗರ ರೂಪ ಆಕಾರ ತಾಯಿ ಮಕ್ಕಳು ಅಲ್ಲವೆಂದವು.

" ಗುಜರಾತಲ್ಲಿ ಇವ್ರ ಚಿಗಪ್ಪನ ಜೊತೆಗೆ ಬಿಸಿನೆಸ್ ಮಾಡ್ತಿದ್ದಾರೆ . ಕನ್ನಡದ ಯಾರತ್ರಾನೂ ಮಾತಾಡೊದಿಲ್ಲ. ಮತ್ತೆ ಇವ್ರು ಮದಲಿಂದಾನೂ ಅಷ್ಟೇ. ಯಾರ ಜೊತೆನೂ ಸೇರೋದಿಲ್ಲ . ಅದಿಕ್ಕೆ ಕನ್ನಡ ಸರ್ಯಾಗಿ ಬರಾಕಿಲ್ಲ.".

"ಸರೀನಮ್ಮಾ. ಹಿಂಗೆ ಕೇಳ್ತೀನಿ ಅಂತ ಬೇಜಾರ್ ಮಾಡ್ಕೋಬೇಡಿ . ನಿಮ್ಮ ಮಕ್ಕಳಿಬ್ರೂ ಬೆಳ್ಳಗೆ ಕೆಂಪಗಿದ್ದಾರೆ. ನಿಮಗೆ ಹೋಲೋದಿಲ್ವಲ್ಲಾ ? ".

ಏಜೆಂಟ್ ಉತ್ತರಿಸಲು ಬಾಯ್ತೆರೆದ. ಅಷ್ಟರಲ್ಲಿ ಆಕೆಯೇ ಹೇಳಿದರು.ಅವರಪ್ಪ ಕೆಂಪಗೆ ಇದ್ದರು. ನಮ್ಮನ್ನು ಬಿಟ್ಟು ಬ್ಯಾರೆ ಹೋದ್ರು. ".

"ಆಯ್ತು ಬಿಡು. ಕೇಸೇ ಫೈಸಲ್ " ಅಂತ ಇನ್ಸ್‌ಪೆಕ್ಟರ್ ತಲೆದೂಗಿದರು !.

" ಸರಿ .ನಿಮ್ಮದು ವೋಟರ್ ಚೀಟಿ ತಂದುಕೊಡಿ . " ಅಂದರು.

"ಬರಾಕೆ ಮದ್ಲು ನಾನೇ ಕೇಳ್ದೆ ಸಾರ್. ವೋಟರ್ ಚೀಟಿ ಕಳದು ಹೋಗೈತೆ ಅಂದ್ರು. ಪಡಿತರ ಚೀಟೀಲಿ ಹೆಸ್ರಿದೆ ನೋಡಿ ಸಾರ್." ಎಂದು ಏಜೆಂಟ್ ಬಾಯಿ ಹಾಕಿದ.

" ಸರಿ ನೀವೆಲ್ಲಾ ಹೊರಡಿ " ಎಂದ ಇನ್ಸ್‌ಪೆಕ್ಟರ್ ,
ಇನ್ನೊಬ್ಬ ಪೇದೆಯನ್ನು ಕರೆದು, " ಲೇಯ್ ಚಂದ್ರೇಗೌಡ, ಇವರ ಹಿಂದೆನೇ ಹೋಗಿ ಏನೇನು ಮಾಡ್ತಾರೆ , ಎಲ್ಲೆಲ್ಲಿಗೆ ಹೋಗ್ತಾರೆ ನೋಡ್ಕಂಡು ಬಾ. " ಅಂದರು.

ಆ ಸಂಜೆಯೇ ಚಂದ್ರೇಗೌಡ ಅಸಲೀಯತ್ತು ವರದಿ ಮಾಡಿದ .
" ಅವಳು ಶಾಂತಿನಗರದಲ್ಲಿ ಕೂಲಿ ಪಾಲಿ ಮಾಡ್ಕಂಡು ಇದ್ದಾಳೆ. ಈ ಹುಡುಗರು ಬೇರೆ ಇಬ್ಬರು ಹುಡುಗರ ಜೊತೆಗೆ ಉದಯಗಿರಿಯಲ್ಲಿ ಬಾಡಿಗೆಗೆ ಇದ್ದಾರೆ .
' ಒಳ್ಳೆ ಹುಡುಗ್ರು .
ಅವರ ಪಾಡಿಗೆ ಓದ್ಕಂಡು ಇದ್ದಾರೆ' ಅಂತ ಬಾಡಿಗೆ ಕೊಟ್ಟಿರೋ ಮನೆ ಓನರ್ರು ಹೇಳಿದ್ರು ಸಾರ್ ".

" ಹಾಗಿದ್ರೆ ಈ ಏಜಂಟೂ ?".

" ಅವ್ನು ಮಹಮದ್ ಸೇಟ್ ಬ್ಲಾಕಲ್ಲಿದ್ದಾನೆ. ಪಾಸ್ ಪೋರ್ಟ್, ಪಡಿತರ ಚೀಟಿ , ಡಿಎಲ್ ಎಲ್ಲಾ ಮಾಡಿಸಿಕೊಡ್ತಾನೆ.".

ಮೊದಲು ವೆರಿಫಿಕೇಷನ್ ಮಾಡಿದ್ದ ಪೇದೆಯನ್ನು ಕರೆದು,
" ಲೇಯ್. ಇದು ವೆರಿಫಿಕೇಷನ್ ವಿಚಾರ. ಕೊಂಚ ಎಡವಟ್ಟಾದರೂ ಕೆಲ್ಸಾ ಕಳಕೊಂಡು ಮನೆಗೆ ಹೋಗಿಬಿಡ್ತೀಯಾ ಮಗನೇ.ಉರ್ದು ಬರುತ್ತೆ ಅಂತ ನೇಮಿಸಿದರೆ ಎಂಥಾ ಕೆಲ್ಸ ಮಾಡಿದ್ದೀಯಾ ?. ಮೊದ್ಲಿಗೆ ನೀನು ಪೋಲೀಸು. ಯಾವನೋ ಸಾಬಿಯಲ್ಲ. ನೋಡ್ಕಂಡು ಕೆಲ್ಸಾ ಮಾಡು, ಹುಷಾರ್!‌." ಎಂದವರೇ ,

" ಈಗಲೇ ಒಂದು ರಿಪೋರ್ಟ್ ಬರೆದುಕೊಡು ."

" ಏನಂತ ಬರೆದು ಕೊಡಲಿ ಸಾರ್ ?."

" ಖುದ್ದಾಗಿ ಹೋಗಿ ಜಾಗದಲ್ಲಿ ಪರಿಶೀಲನೆ ಮಾಡಿದೆ. ಇವರುಗಳು ಈಗ ವಾಸ ಮಾಡುತ್ತಿರುವ ಜಾಗಕ್ಕೆ ಹೊಸದಾಗಿ ಬಂದಿರುತ್ತಾರೆ ಎಂದು ತಿಳಿದುಬಂದಿರುತ್ತದೆ. ಇವರ ನಡವಳಿಕೆ ಸಂಶಯಾಸ್ಪದವಾಗಿರುತ್ತೆ ಅಂತ ಬರೆದುಕೊಡು " ಎಂದರು.

ಇನ್ನು ತಡ ಮಾಡುವಂತಿರಲಿಲ್ಲ.‌

" ಪೇದೆಯ ವರದಿಯನ್ನು ಆಧರಿಸಿ , ತಾನೂ ಕೂಡ ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿದ್ದು , ಸಂಶಯಾಸ್ಪದ ನಡವಳಿಕೆಗಾಗಿ ಅರ್ಜಿಯನ್ನು ತಿರಸ್ಕರಿಸುವಂತೆ ಷರಾ ಬರೆದು ಕಮೀಷನರ್ ಕಛೇರಿಗೆ ರವಾನಿಸೇಬಿಟ್ಟರು ಇನ್ಸ್‌ಪೆಕ್ಟರ್ ಎಚ್.ಎಲ್.ನಾಗರಾಜ್.

*

ಭಾಗ - ಎರಡು

ಇದಾಗಿ ಮೂರ್ನಾಲ್ಕು ದಿನ ಮುಗಿದಿತ್ತು. ಡಿಸಿಪಿಯವರ ಫೋನ್.

" ಯಾಕ್ರೀ ನಾಗರಾಜ್ ?. ಇಂಥಾ ಸಿಂಪಲ್ ವೆರಿಫಿಕೇಷನ್ ನಲ್ಲೆಲ್ಲಾ ತರಲೆ ಮಾಡ್ಕೋತೀರಿ. ಮೂವತ್ತೈದು ನಲವತ್ತು ಜನ ಕಮೀಷನರ್ ಅವರನ್ನ ಭೆಟ್ಟಿಮಾಡಿ,
' ಎಲ್ಲಾ ರೆಕಾರ್ಡ್ಸ್ ಕರೆಕ್ಟಾಗಿದೆ .ಬೇಕೂ ಅಂತ ಕನ್ನಡ ಸರಿಯಾಗಿ ಬರೋದಿಲ್ಲ ಎಂದೆಲ್ಲಾ ತೊಂದರೆ ಕೊಡ್ತಿದ್ದಾರೆ. ಏನೇನೋ ಬೈದು ಕಿರಿಕಿರಿ ಮಾಡ್ತಿದ್ದಾರೆ. ಮುಸ್ಲಿಮ್ಸ್ ಅಂದ್ರೆ ಹೀಗೇ ಯಾವಾಗ್ಲೂ ಪಾರ್ಷಾಲ್ಟಿ partiality ಮಾಡ್ತಾರೆ . ಮುಸ್ಲಿಮ್ಸ್ ಏನು ಈ ದೇಶದಲ್ಲಿ ಇರೋದೇ ಬೇಡ್ವಾ? ' ಅಂತೆಲ್ಲಾ ಆಪಾದನೆ ಮಾಡ್ತಿದ್ದಾರೆ.... ಹೋಗಲಿ. ಅವರು ಅಡ್ರೆಸ್ ಪ್ರೂಫ್ ಎಲ್ಲಾ ಸರಿಯಾಗಿ ಕೊಟ್ಟಿದ್ದಾರಾ ?. ಏನೇನು ಕೊಟ್ಟಿದ್ದಾರೆ ? " .

" ಎಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ , ಡಿ.ಎಲ್ , ಜನನ ಪ್ರಮಾಣಪತ್ರ, ಚುನಾವಣಾ ಚೀಟಿ , ಪಡಿತರ ಚೀಟಿ ಹೀಗೆ ಎಲ್ಲಾ ಇದೆ ಸರ್ ".

" ಎಲ್ಲಾ ಸರಿ ಇದ್ದ ಮೇಲೆ ಯಾಕೆ ತಕರಾರು ?. ಕೋರ್ಟ್ ನಲ್ಲಿ ಜಡ್ಜ್ ಅವರೇ ವೆರಿಫೈ ಮಾಡಿ ಸರ್ಟಿಫಿಕೇಟ್ ಕೊಟ್ಟಿದ್ದಾರಂತೆ. ಅಂದ್ಮೇಲೆ ನೀವ್ಯಾಕೆ ತರ್ಲೆ ಮಾಡ್ತಿದ್ದೀರಿ ?

" ಇಂಡಿಯನ್ ಪಾಸ್ ಪೋರ್ಟ್ ಹೊಂದಬೇಕು ಅಂದ್ರೆ ಕನ್ನಡವೇ ಬರಬೇಕಾ ?. ಕನ್ನಡ ಸರಿಯಾಗಿ ಬರೋದಿಲ್ಲ ಅಂತ ಅಬ್ಜಕ್ಷನ್ ಹಾಕಿದ್ರೆ ನೋಡೋರಿಗಾದ್ರೂ ಏನನ್ಸುತ್ತೆ ನೀವೇ ಹೇಳಿ ".
ಡಿಸಿಪಿ ರಾಜೇಂದ್ರ ಪ್ರಸಾದ್ ಅವರ ಮಾತಿನಲ್ಲಿ ಅಸಮಾಧಾನ ಮಡುಗಟ್ಟಿತ್ತು.

ಪಾಸ್‌ಪೋರ್ಟ್ ನಂತಹ ಚಿಲ್ಲರೆ ವಿಚಾರದಲ್ಲೂ ಇವೆಲ್ಲಾ ತಕರಾರೇ ? ಈ ಕಟುತ್ವ ಬೇಕೇ ? ಎಂಬ ಧಾಟಿ ಅಲ್ಲಿತ್ತು.

ನಡೆದಿದ್ದ ವಿದ್ಯಮಾನ ವನ್ನೆಲ್ಲಾ ಇನ್ಸ್‌ಪೆಕ್ಟರ್ ವಿವರಿಸಿದರು.
" ಆವತ್ತೇ ರಿಜೆಕ್ಟ್ ಮಾಡಿ ತಮ್ಮ ಆಫೀಸಿಗೆ ಕಳ್ಸಿದ್ದೀನಿ ಸರ್ ".

" ಓ ಹೌದಾ ? ಈಗ ನಮ್ಮ ಆಫೀಸ್ ಗೆ ಬೇಗ ಬನ್ನಿ. ಕನ್ನಡದ ನೆಪದಲ್ಲಿ ಮುಸ್ಲಿಮರಿಗೆ ಕಿರುಕುಳ ಕೊಡ್ತಿದ್ದಾರೆ ಅಂತೆಲ್ಲಾ ಆದರೆ ಸರಿಯಾಗೋದಿಲ್ಲ. It sends wrong message. ನೀವು ಬೇಗ ಬನ್ನಿ" .

ಬರೆದಿದ್ದ ಷರಾ ಬದಲಾಯಿಸಿ ಹೊಸದಾಗಿ ಬರೆದು ರೆಕಮಂಡ್ ಮಾಡುವ ಬುಲಾವ್ ಅದು .

ಅಲ್ಲಿ ಹೋಗಿ ನೋಡಿದರೆ , ಆ ರಿಪೋರ್ಟ್ ಅದಾಗಲೇ ಸೈನ್ ಆಗಿ ಪಾಸ್ ಪೋರ್ಟ್ ಕಛೇರಿಗೆ ಹೋಗೇಬಿಟ್ಟಿದೆ. ವೆರಿಫಿಕೇಷನ್ ಆಗಿದ್ದ ಇತರ 15 - 20 ವರದಿಗಳನ್ನು ಒಟ್ಟಿಗೆ ಒಂದೇ ಬಂಡಲ್ ನಲ್ಲಿ ಕಳಿಸಿದ್ದಾರೆ. ಸಹಿಯನ್ನು ಸ್ವತಃ ಡಿಸಿಪಿ ರಾಜೇಂದ್ರ ಪ್ರಸಾದ್ ಅವರೇ ಹಾಕಿಬಿಟ್ಟಿದ್ದಾರೆ !.

" ಹೋಗಲಿ ಬಿಡಿ. ಇನ್ನೊಂದು ಬಾರಿ ಹೊಸದಾಗಿ ಅಪ್ಲೈ ಮಾಡು ಅಂತ ಹೇಳಿದರಾಯ್ತು. Don't give room for such silly allegations. ಕನ್ನಡ ಸರಿಯಾಗಿ ಬರೋದಿಲ್ಲ ಅಂತ ರಿಜೆಕ್ಟ್ ಮಾಡೋದು
ಸರಿಯಲ್ಲ. ಮತ್ತು ಅದು ಸರಿಯಾದ ಕಾರಣವೂ ಅಲ್ಲ. "

ಮಾಡೋ ಕೆಲಸ ಮಾಡಿದ್ರೂ ಮಕಕ್ಕೆ ಉಗಿಸಿಕೊಳ್ಳೋದು ಪೊಲೀಸರ ಹಣೆಬರಹ . ಹಾಗಿದ್ದರೆ ವೆರಿಫಿಕೇಷನ್ ಅನ್ನೋದು ನಾಮ್ ಕಾವಸ್ತೇನಾ ?. ರೆಕಾರ್ಡ್ಸ್ ಸರಿ ಇದ್ದರೆ ಸಾಕಾ ?.ಪೋಲೀಸರು ಏನು ಮಾಡಿದರೂ ಲಂಚದ ಅಥವಾ ಪಕ್ಷಪಾತದ ಆಪಾದನೆ !. ಇಲ್ಲವೇ ಜಾತಿ ತಾರತಮ್ಯ. ಹೆಣ್ಣಾದರೆ ಚಾರಿತ್ರ್ಯವಧೆ. ಪೊಲೀಸ್ ಕೆಲಸ ಅಂದರೆ ಬರೀ ಉಗಿಸಿಕೊಳ್ಳೋದೇ ಆಯ್ತಲ್ಲ ಅಂತೆಲ್ಲ ಇನ್ಸ್‌ಪೆಕ್ಟರ್ ನಾಗರಾಜ್ ನೊಂದುಕೊಂಡರು.

ಈ ಹಿಂದೆ ಅವರು ಇಂಟೆಲಿಜೆನ್ಸ್ ನಲ್ಲಿ ಕೆಲಸ ಮಾಡಿದ್ದರು. ಆ ಅನುಭವ ಈ ರಿಪೋರ್ಟಿಗೆ ಕಾರಣ. ಏನೋ ಹೊಳೆಯಿತು. ಐ.ಬಿ. ಮುಂತಾದ ಲಿಂಕ್ ಗಳಿಗೆ ಗುಪ್ತವಾಗಿ ಟಕಟಕ ಮಾಹಿತಿ ಮುಟ್ಟಿಸಿ ಸುಮ್ಮನಾದರು.

ಕಮೀಷನರ್ ಅವರಿಂದ ಫೋನ್ ಬಂತು.
" ರೆಕಾರ್ಡ್ಸ್ ಎಲ್ಲವೂ ಸರಿ ಇದ್ದಾಗ , ಮುಸ್ಲಿಂ ಎಂಬ ಕಾರಣಕ್ಕೆ #ಕನ್ನಡದ ನೆಪ ಒಡ್ಡಬಾರದಿತ್ತು." ಅವರದೂ ಅದೇ ಆಕ್ಷೇಪಣೆ.

*
ಎರಡೇ ತಿಂಗಳು !.

ಮೈಸೂರಿನಲ್ಲಿ ಏಕೆ 47 ಮಾರಕಾಸ್ತ್ರ ಹೊಂದಿದ್ದ ಮೂವರು ಉಗ್ರಗಾಮಿಗಳು ಸೆರೆಯಾದರು. ಅವರ ಲ್ಯಾಪ್‌ಟಾಪ್ ಸಂಪರ್ಕ ವಸ್ತುಗಳೆಲ್ಲವೂ ಸೀಜ಼್ ಆದವು.ಅವರಲ್ಲಿ ಸಿಕ್ಕ ವಸ್ತುಗಳಾದರೂ ಏನು ?.
ಬೇರೆ ದೇಶಗಳ ಪಾಸ್ ಪೋರ್ಟ್ಗಳು , ಸ್ಪೋಟಕಗಳು , ಅಪಾರ ಹಣ, ವಿದೇಶಿ ಕರೆನ್ಸಿಗಳು. ಹೊರಬಂದ ಸತ್ಯಸಂಗತಿ ಕೇಳಿ ಇಡೀ ರಾಜ್ಯವೇ ದಂಗು ಬಡಿಯಿತು.

ಬಂಧಿತರಲ್ಲಿ #ಅಲಿ_ಹುಸೇನ್ ಎಂಬಾತ ಕಾಶ್ಮೀರದಲ್ಲಿ ಇಪ್ಪತ್ತೆರಡು ಪೊಲೀಸರನ್ನು ಬರ್ಬರವಾಗಿ ಕೊಂದಿದ್ದ ಒಬ್ಬ ಪಾಕಿಸ್ತಾನಿ . ಪೋಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ.ಕೇರಳ ಮತ್ತು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸ್ಲೀಪರ್ ಸೆಲ್ ಸಂಘಟನೆಗೆ ತೊಡಗಿದ್ದ. ಅನೇಕ ಹೇಯ ಕೃತ್ಯಗಳನ್ನೆಸಗುವ ಸರಣಿಗೆ ಸ್ಕೆಚ್ ಹಾಕಿದ್ದ.

ಇದೇ ಎಚ್.ಎಲ್. ನಾಗರಾಜ್ ಪಾಸ್ ಪೋರ್ಟ್ ರಿಜೆಕ್ಟ್ ಮಾಡಿ ಕಳಿಸಿದ್ದ ಅದೇ ಆಸಾಮಿಗಳಲ್ಲಿ ಒಬ್ಬ . ಅವರ ಮೇಲೂ ಹಲ್ಲೆಗೆ ಮುಂದಾಗಿದ್ದ.

ಇನ್ನೊಬ್ಬ ಪಾತಕಿ ಫಹಾದ್ !. ಅವನೂ ಪಾಕಿಸ್ತಾನಿ. ಕಾಶ್ಮೀರದಲ್ಲಿ ಅನೇಕ
ಪಾತಕಗಳನ್ನು ಮಾಡಿ ಕೇರಳಕ್ಕೆ ಪರಾರಿಯಾಗಿ ಅಲಿ ಅಹ್ಮದನ ಜೊತೆಗೂಡಿದ್ದ.

ಈ ಇಬ್ಬರೂ ಕೇರಳದ ಬುದ್ದಿಜೀವಿ * #ಸ್ಲೀಪರ್_ಸೆಲ್ ಗಳ ಮೂಲಕ ಕರ್ನಾಟಕದೊಳಕ್ಕೆ ನುಸುಳಿದ್ದರು !. ಇವರಿಗೆ ಮಾರ್ಕ್ಸ್ ಕಾರ್ಡ್ ನಿಂದ ಹಿಡಿದು ಡಿ.ಎಲ್. , ವೋಟರ್ ID , ಹೀಗೆ ಸಮಸ್ತ ಅನುಕೂಲತೆಗಳ ರತ್ನಗಂಬಳಿ ಹಾಸಿ ಕರೆದು ಕೊಂಡಿದ್ದರು ಇಲ್ಲಿನ ದ್ರೋಹಿಗಳು. ಪಾತಕಿ ಅಲಿಯು ಮೈಸೂರಿನಲ್ಲೇ ಹುಟ್ಟಿದವನೆಂಬ ಜನನ ಪ್ರಮಾಣಪತ್ರವನ್ನು ಸಹ ನ್ಯಾಯಾಧೀಶರಿಂದಲೇ ಕೊಡಿಸಿದ್ದರು.

ಇವರನ್ನು ಹಿಡಿಯಲು ದೊಡ್ಡ ಕಾರ್ಯಾಚರಣೆಯೇ ನಡೆಯಿತು. ಷೂಟೌಟ್ ಕೂಡಾ ಆಯಿತು. ಇದು ನಡೆದದ್ದು 2006 ರಲ್ಲಿ. ಈ ಉಗ್ರರೆಲ್ಲಾ ಇನ್ನೂ ಮೈಸೂರಿನ ಜೈಲಲ್ಲಿದ್ದಾರೆ.

ಅಮಾಯಕ ಮುಗ್ಧರಾದ ಇವರನ್ನು ಬಿಡಿಸಿಕೊಳ್ಳಲು ನಮ್ಮವರೇ ಅನೇಕ ದೇಶಭಕ್ತರ ಮತ್ತು #SLEEPER_CELLಬುದ್ದಿಜೀವಿಗಳ ದಂಡೇ ಶ್ರಮಿಸಿತು . ಅವರಲ್ಲಿ ಅನೇಕರು ಮಹಾನ್ ಮಾನವತಾವಾದಿಗಳು ;ಜಾತ್ಯಾತೀತ ಸಿದ್ಧಾಂತಿಗಳು ಮತ್ತು ಹಿಂದೂಗಳು !.
ಸದ್ಯ ಇವರ ಯತ್ನ ಈವರೆಗೆ ಫಲಕಂಡಿಲ್ಲ. ಮುಗ್ಧ ವಿದ್ಯಾರ್ಥಿಗಳ ಮೇಲೆ ಉಗ್ರರೆಂಬ ಹಣೆಪಟ್ಟಿ ಕಟ್ಟಿ ಪೊಲೀಸರು ಸುಳ್ಳು ಕೇಸು ಹಾಕಿದ್ದಾರೆಂಬ ಸುದ್ದಿ ಚಾಲ್ತಿಯಲ್ಲಿದೆ.
*
ಕಾರ್ಯಾಚರಣೆಯ ರಾತ್ರಿ , ಉಳಿದ ಅಧಿಕಾರಿಗಳನ್ನು ಹೊರಕಳಿಸಿದ ಕಮೀಷನರ್ ಶ್ರೀ ಪ್ರವೀಣ್ ಸೂದ್ ಕೇಳಿದರು.

" ನಿಮಗೆ ಇವರುಗಳು ಉಗ್ರರ ಚಟುವಟಿಕೆಯಲ್ಲಿದ್ದಾರೆ ಅಂತ ಅನುಮಾನ ಹೇಗೆ ಬಂತು ನಾಗರಾಜ್ ? ".

" ಮೊದಲು ಗುಪ್ತಚರ ವಿಭಾಗದಲ್ಲಿ ಇದ್ದೆನಲ್ಲಾ ಸರ್ ಅದರದೇ ಅನುಭವ !. ಅದಕ್ಕಿಂತಲೂ ನನ್ನ ಸಹೋದ್ಯೋಗಿ ಸಬ್ ಇನ್ಸ್‌ಪೆಕ್ಟರ್ ಪ್ರಸಾದ್ ಡಿಸ್ ಮಿಸ್ ಆಗಿದ್ದರಲ್ಲಾ ? . ಆ ಟ್ರ್ಯಾಜಿಡಿ ನೆನಪಿತ್ತು ! " .

" ಅವರೇಕೆ ಡಿಸ್ ಮಿಸ್ ಆದರು ?".

" ಮಂಡ್ಯ ಪಶ್ಚಿಮ ಠಾಣೆಗೆ ಹೀಗೇ ಯಾವುದೋ ವೆರಿಫಿಕೇಷನ್ ಬಂದಿತ್ತು. ಅಸಲಿಗೆ ಆ ವ್ಯಕ್ತಿಗಳು ಆ ವಿಳಾಸದಲ್ಲಿ ವಾಸವೇ ಇರಲಿಲ್ಲ. ಲೋಕಲ್ ರಾಜಕಾರಣಿಗಳು ಕಾರಣ ಹೇಳಿದರು.
" ಕೆಲಸದ ಮೇಲೆ ಕಲ್ಕತ್ತಾಗೆ ಹೋಗಿದ್ದಾರೆ. ಮುಂದಿನ ವಾರದಲ್ಲಿ ಕರೆಸಿ ನಿಮ್ಮ ಮುಂದೆ ಅವರನ್ನು ಹಾಜರು ಮಾಡ್ತೇವೆ. ಈಗ ಅರ್ಜೆಂಟಾಗಿ ಸೈನ್ ಹಾಕಿ ಕಳಿಸಿಕೊಡಿ ಸಾರ್. ಇಲ್ಲದಿದ್ರೆ ಪಾಸ್ ಪೋರ್ಟ್ ಸಿಕ್ಕೋದು ಮತ್ತೆ ಮಿಸ್ಸಾಗುತ್ತೆ " ಗೋಗರೆದರು.

ಗಿತ್ತಿರುವ ಲೋಕಲ್ ಜನಗಳೇ ಹಾಜರು ಪಡಿಸುತ್ತೇವೆ ಅಂತ ಹೇಳ್ತಿದ್ದಾರಲ್ಲ ಎಂದು
ಸಬ್ ಇನ್ಸ್‌ಪೆಕ್ಟರ್ casualಆಗಿ ಸುಮ್ಮನೆ ಸಹಿ ಹಾಕಿ ಕಳಿಸಿಯೇ ಬಿಟ್ಟರು.

" ಆಮೇಲೆ ನೋಡಿದರೆ ಅವರುಗಳು ಉಗ್ರ ಪಾತಕಿಗಳಾದ ಮೆಮೋನ್ ಬ್ರದರ್ಸ್ ಗಳಾಗಿದ್ದರು !. ಮಂಡ್ಯದ ಗುತ್ತಲು ನಿವಾಸಿಗಳು ಎಂದು ತೋರಿಸಿಕೊಂಡಿದ್ದರು.
ಅಸಲಿಗೆ ಅವರು ಅಲ್ಲಿ ವಾಸವೇ ಇರಲಿಲ್ಲ !. ಅವರ ಫೋಟೋ ನೋಡಿ ವಾಡಿಕೆಯಂತೆ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ರೆಕಮಂಡ್ ಮಾಡಿ ಕಳಿಸಿಬಿಟ್ಟಿದ್ದರು. ಅದಕ್ಕಾಗಿ ಕೆಲಸವನ್ನೂ ಕಳೆದುಕೊಂಡರು.

" ಇದು ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದಿತ್ತು ಸರ್ ".

" ನೀವೇನಾದರೂ ಅಕಸ್ಮಾತ್ ಬ್ಲೈಂಡ್ ಆಗಿ ರೆಕಮಂಡ್ ಮಾಡಿ ಕಳಿಸಿದ್ದಿದ್ದರೆ , ಡಿ.ಎಲ್ ಕೊಟ್ಟ ಆರ್ ಟಿ ಓ ಯಿಂದ ಹಿಡಿದು ಎಲ್ಲರಿಗೂ ತೊಂದರೆಯಾಗುತ್ತಿತ್ತು. You did a wonderful job and saved the country ".

ಕಾರ್ಯಾಚರಣೆಯಲ್ಲಿ ನೇರವಾಗಿ ಪಾಲ್ಗೊಂಡಿರಲಿಲ್ಲವಾಗಿ ಎಚ್.ಎಲ್. ನಾಗರಾಜ್ ಮತ್ತು ಪೇದೆ ಚಂದ್ರೇಗೌಡರಿಗೆ ಯಾವ ಬಹುಮಾನವೂ ಸಿಕ್ಕಲಿಲ್ಲ.

ಅಜ್ಞಾತ ಸಾಧಕರು ಅಜ್ಞಾತರಾಗಿಯೇ ಉಳಿಯುತ್ತಾರಲ್ಲಾ ಎಂಬುದೇ ವ್ಯಥೆ.
*
ವಿ.ಸೂ :
#ಸ್ಲೀಪರ್ ಸೆಲ್ ಗಳು ಅಂದರೆ ಯಾರು ? ಹೇಗಿರುತ್ತಾರೆ ?
ನಮ್ಮ ಬುಜೀ , ಗಂಜಿ ಗಿರಾಕಿಗಳಲ್ಲಿ ಬಹುತೇಕರು ಸ್ಲೀಪರ್ ಸೆಲ್ ದ್ರೋಹಿಗಳು ಎನ್ನುತ್ತಾರಲ್ಲಾ ಅದು ನಿಜವೇ ?

ಮುಂದಿನ ವಾರದಲ್ಲಿ ನಿಮ್ಮ ಮುಂದಿಡುವೆ .

*
A sleeper cell is a group of operatives, spies or terrorists, living in secret among a targeted community waiting for instructions or an opportunity to act.1-dot
ಪ್ರತಿಯೊಬ್ಬರು ಓದಲೇ ಬೇಕಾದ ಲೇಖನವಿದು. ಬರೆದವರು #Jbrswamy_Rangaswamy. #ಮೈಸೂರಿನಲ್ಲೂ_ಉಗ್ರರು. ಅವರು ನುಸುಳಲು #ನೆರವು_ನೀಡಿದವರು ಯಾರು ? ಭಾಗ - 1 ಮತ್ತು 2 * ಮೈಸ...
ಪೋಸ್ಟ್ ಮಾಡಿ · 4 ಫೋಟೊಗಳು  






**********************










ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ